Pages

Monday, March 3, 2014





ಮೌನವಲ್ಲದೆ ಮತ್ತೇನಿದೆ ನನ್ನ ಬಾಳಲಿ,
ಏಕೆಂದರೆ ನೀನಿಲ್ಲ ನಲ್ಲೆ ನನ್ನ ಬಳಿಯಲಿ,
ಮತ್ತೆ ಸೇರಿಕೊಳ್ಳೋಣ ಬಾ ಹಗಲಿರುಳಲಿ,
ಕಳೆದಿರುಳ ಒಟ್ಟಾಗಿ ನೆನೆಯೋಣ ಬಾ ಬೆಳದಿಂಗಳಲಿ.




 
ಮಾಸದ ಮನಸು
ಯಾವ ನೀರಿನಲಿ ಯಾವ ಬಣ್ಣವೋ
ಬೆರಿಸಿದಾತನೆ ಬಲ್ಲ,
ಯಾರ ಮನಸಲಿ ಇನ್ಯಾರ ಕನಸೋ
ಸೇರಿಸಾದತನೆ ಬಲ್ಲ :-)

Friday, March 15, 2013









ಪ್ರತಿಕ್ಷಣ ಹೃದಯ ಕೊರೆವ ಈ ಪ್ರೀತಿಯ ಬಗೆಯೇನೋ,
ಮತ್ತೆ ಅದೇ ನೆನಪುಗಳ ಹವಣಿಕೆಗಳೇನೋ,
ಬಿಟ್ಟೆನೆಂದರು ಬಿಡಲಾರದಿ ಈ ಬವಣೆಗಳು,
ನಲಿವಿನೊಡನೆ ನೋವಿಡುವ ಈ ಪ್ರೀತಿಯ ರೀತಿಯೇನೋ..

Thursday, February 28, 2013

ಮತ್ತೆ ಮರಳಿದ ನೆನಪುಗಳು




ಹಗಲಿರುಳ ಕನಸುಗಳಲಿ
ಕಾಡಿದ ಕಣ್ಣುಗಳವು,
ಮಾಸಿದ ಮನಸಿನಲಿ
ಇಣುಕಿದ ನೋಟಗಳವು,
ಮಲಗಿದ್ದೆನೆದೆಯ ಕನಸುಗಳು ಸೋತು
ಕಣ್ಣರೆಪ್ಪೆಯ ಸದ್ದಿನಿಂದೆಬ್ಬಿಸಿದ ಬಡಿತಗಳವು,
ಇಂದೇಕೆ ದುರಾದವು,
 ನೋಟವು ನಿಲುಕಲಾರದ ದೂರಕೆ...